An Appeal

|| ಶ್ರೀ ಶಾರದಾ ಚಂದ್ರಮೌಳೇಶ್ವರ ಪ್ರಸನ್ನ ||
|| ಜಗದ್ಗುರು ಶ್ರೀ ಆದಿಶಂಕರಚಾರ್ಯ ಗುರುಭ್ಯೋ ನಮಃ ||

ಮಾನ್ಯರೇ,

ಶ್ರೀ ಅದ್ವೈತ ಪೀಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಭಾರತೀ ಮಹಾಸ್ವಾಮಿಗಳು ಸಕಲ ಶಿಷ್ಯಕೋಟಿ ವೃಂದದ ಮೂಲಕ ಹಾಗೂ ನಾರಾಯಣ ಸ್ಮರಣೆಯೊಂದಿಗೆ.

ಜಗದ್ಗುರು ಪರಮಪೂಜ್ಯ ಶ್ರೀ ಆದಿಶಂಕರಚಾರ್ಯ ಭಗವತ್ಪಾದರಿಂದ ಪ್ರವರ್ತಮಾನವಾದ ದಕ್ಷಿಣಾಮ್ನಾಯ ಶೃಂಗೇರಿ ಮಹಾಸಂಸ್ಥಾನ ಶ್ರೀ ಶಾರದಾಪೀಠದ ಜಗದ್ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಭಾರತೀತೀರ್ಥ ಮಹಾಸನ್ನಿಧಾನದವರು ಹಾಗೂ ತತ್‌ಕರಕಮಲ ಸಂಜಾತರಾದ ಜಗದ್ಗುರು ಪರಮಪೂಜ್ಯ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳ ಪರಮ ಆಶೀರ್ವಾದ ಅನುಗ್ರಹದೊಂದಿಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವಾನಂದಭಾರತೀ ಮಹಾಸ್ವಾಮಿಗಳವರು ಅದ್ವೈತ ಪೀಠವನ್ನು ಸ್ಥಾಪಿಸಲು ಉತ್ಸುಕರಾಗಿದ್ದಾರೆ.


 

ಮಹಾಸ್ವಾಮಿಗಳ ಪರಿಚಯ:

ಕರ್ನಾಟಕ ರಾಜ್ಯದ ಚಿಕ್ಕಮಗಳೂರು ನಗರದಲ್ಲಿ ವಾಸವಾಗಿದ್ದ ಯಜುರ್ವೇದ ಶಾಖೆಯ ಆಪಸ್ಥಂಭ ಸೂತ್ರ ವಿಶ್ವಾಮಿತ್ರಗೋತ್ರದ ಅನುಯಾಯಿಯಾಗಿದ್ದ ವೇ||ಬ್ರ||ಶ್ರೀ ನಾಗಭೂಷಣ ಘನಪಾಟೀ ಶ್ರೀಮತಿ ಲೀಲಾವತಿ ಇವರ ಗರ್ಭದಲ್ಲಿ ದಿನಾಂಕ: 23/12/1974 ರ ಮಾರ್ಗಶಿರ ಮಾಸದ ಶುದ್ಧ ಏಕಾದಶಿಯಂದು ಮುಂಜಾನೆ 8:55 ಗಂಟೆಗೆ ಜನನ.

ಪೂರ್ವಶ್ರಮದಲ್ಲಿ ಈಶ್ವರನ ಅನುಗ್ರಹಿತರಾಗಿ ಈಶ್ವರ ಪ್ರಸಾದ ನಾಮಾಂಕಿತರಾಗಿ ತದ ನಂತರ ಶ್ರೀ ರಾಘವೇಂದ್ರ ಪ್ರಸಾದಶರ್ಮ ಎಂಬ ವ್ಯವಾಹಾರಿಕ ನಾಮದಿಂದ ಲೌಖಿಕ ವಿದ್ಯಾಭ್ಯಾಸ ಮಾಡಿದ ಶ್ರೀಗಳು. ಮುಂದೆ ಸಖರಾಯಪಟ್ಟಣದ ಗುರುನಾಥರೆಂದೇ ವಿಶ್ವವಿಖ್ಯಾತರಾದ ಶ್ರೀ ವೇಂಕಟಾಚಲ ಅವಧೂತರು, ಭಗವಾನ್ ಶ್ರೀ ರಮಣಮಹರ್ಷಿಗಳು, ವರದಹಳ್ಳಿಯ ಶ್ರೀ ಶ್ರೀಧರನಂದ ಸ್ವಾಮಿಗಳಿಂದ ಪ್ರಭಾವಿತರಾಗಿ ಸ್ವಶಾಖ ಅಧ್ಯಯನವನ್ನು ಮೈಸೂರು ಮತ್ತು ಹಲವೆಡೆ ಅಧ್ಯಯನ ಮಾಡಿ ಮತ್ತೂರಿನವರ ಬಳಿ ವೇದಾಂತ ಶಾಸ್ತ್ರ ಹಾಗೂ ಶಂಕರಭಗವತ್ಪಾದರ ಪ್ರಸ್ಥಾನತ್ರಯ ಭಾಷಾ ಅಧ್ಯಯನವನ್ನು ಪೂರೈಸಿರುತ್ತಾರೆ.

ನಂತರ 8 ವರ್ಷಗಳ ಕಾಲ ಆಂತರೀಕ ಸನ್ಯಾಸವನ್ನು ಸ್ವೀಕರಿಸಿ 2019 ರಲ್ಲಿ ಬಾಹ್ಯ ಸನ್ಯಾಸವನ್ನು ನರಸೋಬವಾಡಿ ದತ್ತಪೀಠದಲ್ಲಿ ಸ್ವೀಕರಿಸಿ ಪರಮಪೂಜ್ಯ ಶ್ರೀ ಶ್ರೀ ಶಿವಾನಂದಭಾರತೀ ಎಂಬ ಯೋಗಪಟ್ಟದೊಂದಿಗೆ “ಪರಮಹಂಸ ಪರಿವ್ರಾಜಕರಾಗಿ” ಸನ್ಯಾಸವನ್ನು ಸ್ವೀಕರಿಸಿ ತದ ನಂತರ ಆ ಸೇತು-ಕನ್ಯಾಕುಮಾರಿ-ಹಿಮಾಲಯದಲ್ಲಿ ಸಂಚರಿಸಿ ಹಿಮಾಲಯದಲ್ಲಿ ತಮ್ಮ ಅನುಷ್ಠಾನಗಳನ್ನು ಪೂರೈಸಿ ಸಿದ್ಧಿಯೋಗವನ್ನು ಪಡೆದು ಕೊಂಡಿರುತ್ತಾರೆ.

ಮೈಸೂರಿನಲ್ಲಿ ಶ್ರೀ ಅದ್ವೈತ ಪೀಠ ಟ್ರಸ್ಟ್ ಎಂಬ ನೋಂದಾಯಿತ ನ್ಯಾಸವನ್ನು ಸ್ಥಾಪಿಸಿ ಅದ್ವೈತ ಮತ ಪ್ರಚಾರ ಹಾಗೂ ಸನಾತನ ಹಿಂದೂ ಧರ್ಮದ ಪ್ರಚಾರಕ್ಕಾಗಿ ಸದಾ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿರುತ್ತಾರೆ.


 

ಶ್ರೀ ಅದ್ವೈತ ಪೀಠದ ಕಾರ್ಯಯೋಜನೆಗಳು:

  1. ಮೈಸೂರಿನ ಪ್ರಶಾಂತ ವಾತಾವರಣ, ನದಿ ತೀರದಲ್ಲಿ ಸುವ್ಯವಸ್ಥಿತವಾಗಿ ಪೀಠವನ್ನು ನಿರ್ಮಾಣ ಮಾಡುವುದು.
  2. ಶ್ರೀ ಶಾರದಾ-ಚಂದ್ರಮೌಳೇಶ್ವರರ ದೇವಸ್ಥಾನ ಸ್ಥಾಪನೆ.
  3. ಗುರುಭವನ ನಿರ್ಮಾಣ
  4. ಯಾಗಶಾಲೆ ಸ್ಥಾಪನೆ
  5. ಗೋ ಶಾಲಾ ನಿರ್ಮಾಣ
  6. ಪಾಕಶಾಲೆ ನಿರ್ಮಾಣ
  7. ಶ್ರೀ ಅನ್ನಪೂರ್ಣೇಶ್ವರಿ ಭೋಜನ ಶಾಲೆ – ಬರುವ ಭಕ್ತಾಧಿಗಳಿಗೆ ಮಹಾಪ್ರಸಾದಕ್ಕೆ
  8. ಸಂಸ್ಕೃತ ವೇದ ಪಾಠಶಾಲೆ ಇತ್ಯಾದಿಗಳ ನಿರ್ಮಾಣದ ಯೋಜನೆಯಿರುತ್ತದೆ.
  9. ವಾರ್ಷಿಕವಾಗಿ ವೈಶಾಖ ಶುದ್ಧ ಪಂಚಮಿಯಂದು ಶ್ರೀ ಶಂಕರಜಯಂತಿ, ದತ್ತ ಜಯಂತಿ, ಚಾತುರ್ಮಾಸ್ಯ ವ್ರತ ಆಚರಣೆ, ನವರಾತ್ರಿ ದೇವಿ ಅನುಷ್ಠಾನ ಆಚರಣೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಾಡು ಮಾಡುವ ಯೋಜನೆ ಇರುತ್ತದೆ.
  10. ಅದ್ವೈತ ತತ್ವ ಪ್ರಚಾರಕ್ಕಾಗಿ ಶಂಕರ ಸಪ್ತಾಹ, ಅದ್ವೆöÊತ ತತ್ವಗಳ ಗೋಷ್ಠಿ, ಪ್ರವಚನಾದಿಗಳನ್ನು ಏರ್ಪಾಡಿಸುವುದು ಹಾಗೂ ಇದರ ಮೂಲಕ ಇನ್ನು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವುದು.
  11. ಅದ್ವೈತ ಮತದ ಸಂಶೋಧನೆ ಪ್ರಕಟಣೆ ಹಾಗೂ ಪತ್ರಿಕೆಗೆ ಒತ್ತು ಕೊಡುವುದು.
  12. ಗೋ ಸಂರಕ್ಷಣೆ ಮುಂತಾದ ಕಾರ್ಯಕ್ರಮಗಳ ಯೋಜನೆಗಳೊಂದಿಗೆ ಶ್ರೀ ಅದ್ವೆöÊತ ಪೀಠದ ಕಾರ್ಯಕ್ರಮಗಳೊಂದಿಗೆ ಹಿಂದೂ ಧರ್ಮದ ಪ್ರಚಾರಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ.

ಇದಕ್ಕಾಗಿ ಶ್ರೀ ಅದ್ವೈತ ಪೀಠಂ ಟ್ರಸ್ಟ್ ನ ವತಿಯಿಂದ ಉದಾರ ದಾನ ಇತ್ಯಾದಿಗಳಿಗೆ ಆನ್‌ಲೈನ್ ಮೂಲಕ ಹಾಗೂ ತಮ್ಮ ತನು, ಮನ, ಧನದ ಮುಖಾಂತರ ಉದಾರವಾಗಿ ದಾನವನ್ನು ನೀಡುವ ಮೂಲಕ ಆದಾಯ ಸಂದಾಯ ವಿನಾಯಿತಿ 12A ಮತ್ತು ನೀತಿ ಆಯೋಗ ಪ್ರಮಾಣ ಪತ್ರದೊಂದಿಗೆ, 80G ಕಾನೂನಿನ್ವಯದಡಿ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.

ಇದಕ್ಕಾಗಿ ವೈದೀಕ ಧರ್ಮದಲ್ಲಿ ಹಾಗೂ ಶ್ರೀ ಶಂಕರರ ಅದ್ವೈತದಲ್ಲಿ ಅಭಿಮಾನ ಹಾಗೂ ಅನುಸರಿಸುತ್ತಿರುವ ಆಸ್ತಿಕ ಮಹಾಜನತೆ ತಮ್ಮ ಉದಾರವಾದ ತಮ್ಮ ತನು, ಮನ, ಧನದ ರೂಪದಲ್ಲಿ ಸೇವಾ ಮನೋಭಾವ ಸಮರ್ಪಣೆಯೊಂದಿಗೆ ಸೇವೆಯನ್ನು ಸಲ್ಲಿಸಿ ಶ್ರೀ ಶಾರದಾ ಚಂದ್ರಮೌಳೇಶ್ವರ ಹಾಗೂ ಜಗದ್ಗುರು ಶ್ರೀ ಶಂಕರ ಭಗವಾತ್ಪಾದರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು.

ನಾರಾಯಣ ಸ್ಮರಣೆಗಳೊಂದಿಗೆ,